ಖಾಸಗಿ ಸಹಭಾಗಿತ್ವದೊಂದಿಗೆ ಸರ್ಕಾರದ ಐಟಿಐಗಳ ಉನ್ನತೀಕರಣ

ಕೆಎಸ್‍ಡಿಎ ಅಧ್ಯಕ್ಷರು, ಅಧಿಕಾರ ವಹಿಸಿಕೊಂಡ ಆರಂಭಿಕ ದಿನಗಳಲ್ಲಿ, ಚಾಲನೆಯಲ್ಲಿರುವ ಅನೇಕ ಸರ್ಕಾರಿ ಐಟಿಐಗಳು, ತಮ್ಮ ಸ್ವಂತ ಕಟ್ಟಡಗಳಲ್ಲಿ ಹಳೆಯ ತಂತ್ರಜ್ಞಾನ / ಪಠ್ಯಕ್ರಮದೊಂದಿಗೆ ಕಾರ್ಯನಿರ್ವಹಿಸುತ್ತಿವೆ ಮತ್ತು ಆದುದರಿಂದ ಉದ್ಯೋಗದ ಪ್ರಸ್ತುತ ಬೇಡಿಕೆಗಳನ್ನು ಪೂರೈಸಲಾಗುತಿಲ್ಲ ಮತ್ತು ಅವುಗಳನ್ನು ನವೀಕರಿಸುವುದು ಮಾತ್ರವಲ್ಲದೆ ವಿದ್ಯಾರ್ಥಿಗಳಿಗೆ ವಿವಿಧ ಕ್ಷೇತ್ರಗಳಲ್ಲಿನ ಉದ್ಯೋಗದ ಪ್ರಸ್ತುತ ಅಗತ್ಯತೆಗಳಿಗೆ ಅನುಗುಣವಾಗಿ ತರಬೇತಿ ನೀಡುವ ಸಲುವಾಗಿ ಡಿಜಿಟಲ್ ತಂತ್ರಜ್ಞಾನವನ್ನು ಪರಿಚಯಿಸ ಬೇಕೆಂಬುದಾಗಿ ದೃಶ್ಯೀಕರಿದರು/ಅರಿತುಕೊಂಡರು. ಕೆಎಸ್‍ಡಿಎ ಅಧ್ಯಕ್ಷರು, ಸರ್ಕಾರಿ ಐಟಿಐಗಳ ಉನ್ನತೀಕರಣದಲ್ಲಿ ಪ್ರಮುಖ ಪಾತ್ರ ವಹಿಸಲು ಹೆಸರಾಂತ ಖಾಸಗಿ ಪಾಲುದಾರರನ್ನು ಕರೆತರುವ ಅಗತ್ಯವನ್ನು ದೃಶ್ಯೀಕರಿಸಿ ಮತ್ತು ಸೂಕ್ತ ಪಾಲುದಾರರಾಗಿ ಎಂ/ಎಸ್ ಟಾಟಾ ಟೆಕ್ನಾಲೊಜಿಸ್ ಸಂಸ್ಥೆಯನ್ನು ಆಯ್ಕೆ ಮಾಡಿದರು. ಫೆಬ್ರವರಿ 10 ರಂದು,ಕೆಎಸ್‍ಡಿಎ ಅಧ್ಯಕ್ಷರು, ಟಾಟಾ ಟೆಕ್ನಾಲೊಜಿಸ್ ಲಿಮಿಟೆಡ್ ಯೊಟ್ಟಿಗೆ ಸಭೆಯನ್ನು ನಡೆಸಿ ಮತ್ತು ನಂತರ ಮಾರ್ಚ್ 4 ರಂದು, ಪವರ್ ಪಾಯಿಂಟ್ ಪ್ರಸ್ತುತಿಯೊಂದಿಗೆ ವಿವರವಾದ ಸಭೆ ನಡೆಸಿದರು ಹಾಗೂ ಅದಾದನಂತರ ಹಲವಾರು ಸುತ್ತಿನ ಚರ್ಚೆಗಳಾದವು. ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಪೀಣ್ಯ ಉದ್ಯೋಗ ಸಂಘಗಳೂ ಸಹ ಈ ಚರ್ಚೆ ಮತ್ತು ಸಭೆಗಳಲ್ಲಿ ಪಾಲ್ಗೊಂಡಿದ್ದವು.

ಸಭೆಗಳ ಫಲಿತಾಂಶದ ಆಧಾರದ ಮೇಲೆ ಸರ್ಕಾರಿ ಐಟಿಐಗಳ ಶ್ರೇಣೀಕರಣಕ್ಕೆ ಸೂಕ್ತ ಶೀಫಾರಸುಗಳನ್ನು ಮಾಡಲಾಗಿದೆ. ಕೆಎಸ್‍ಡಿಎಯ ಪ್ರಯತ್ನಗಳು ಫಲಪ್ರದ ಫಲಿತಾಂಶಗಳನ್ನು ನೀಡಿವೆ ಎಂದು ಗಮನಿಸುವುದು ಸಂತೋಷಕರವಾಗಿದೆ. ಕರ್ನಾಟಕ ಸರ್ಕಾರವು ಕೆಎಸ್‍ಡಿಎ ಶಿಫಾರಸುಗಳನ್ನು ಅಂಗೀಕರಿಸಿತು ಮತ್ತು ಟಾಟಾ ತಂತ್ರಜ್ಞಾನಗಳ ಖಾಸಗಿ ಸಹಭಾಗಿತ್ವದೊಂದಿಗೆ, 4636 ಕೋಟಿ ವೆಚ್ಚದ 150 ಸರ್ಕಾರಿ ಐಟಿಐಗಳನ್ನು ಶ್ರೇಣೀಕರಿಸಲು ಅನುಮೋದನೆ ನೀಡಿದೆ.

ಎಸ್‍ಡಿಇಎಲ್- ಕರ್ನಾಟಕ ಸರ್ಕಾರ ಮತ್ತು ಟಾಟಾ ಟೆಕ್ನಾಲಜೀಸ್ ಲಿಮಿಟೆಡ್ ನಡುವೆ ಎಂ.ಓ.ಯು ಗೆ ಸಹಿ ಹಾಕಲಾಗಿದೆ