ನಮ್ಮ ಬಗ್ಗೆ

ಕರ್ನಾಟಕ ಸರ್ಕಾರದ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ,ಕೆಎಸ್‍ಡಿಎ, ಕೌಶಲ್ಯ ತರಬೇತಿಯಲ್ಲಿ ಗುಣಮಟ್ಟದ ಮಾನದಂಡಗಳು ಮತ್ತು ಉದ್ಯೋಗ, ಪಠ್ಯಕ್ರಮ ತಯಾರಿಕೆ ಸೇರಿದಂತೆ ಕ್ರೆಡಿಟ್ ಚೌಕಟ್ಟುಗಳು, ತರಬೇತುದಾರರ ತರಬೇತಿಗಾಗಿ ಮಾರ್ಗಸೂಚಿಗಳು (ಟಿಒಟಿ), ಹೊಸದಾದ ಮತ್ತು ಜಾಗತಿಕ ಅತ್ಯುತ್ತಮ ಅಭ್ಯಾಸಗಳನ್ನು ಪರಿಚಯಿಸುವುದು, ವಿನ್ಯಾಸ, ಕಾರ್ಮಿಕ ಮಾರುಕಟ್ಟೆ ಮಾಹಿತಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ಮುಂತಾದವುಗಳನ್ನು ಸ್ಥಾಪಿಸಲು ಸಂಯೋಜಿಸಲಾಗಿದೆ.

ಕೆಎಸ್‍ಡಿಎ ಈ ಕೆಳಕಂಡ ಚಟುವಟಿಕೆಗಳನ್ನು ಕೇಂದ್ರೀಕರಿಸುತ್ತದೆ:
  • ಕೌಶಲ್ಯ ತರಬೇತಿಯಲ್ಲಿ ಗುಣಮಟ್ಟದ ಮಾನದಂಡಗಳನ್ನು ಸ್ಥಾಪಿಸುವುದು.
  • ಪಠ್ಯಕ್ರಮ, ಕೋರ್ಸ್, ವಿಷಯ ಮತ್ತು ಕ್ರೆಡಿಟ್ ಚೌಕಟ್ಟುಗಳನ್ನು ಕೌಶಲ್ಯ ತರಬೇತಿಗಾಗಿ ತಯಾರಿಸುವುದು.
  • ತರಬೇತುದಾರರ ತರಬೇತಿಗಾಗಿ ಮಾರ್ಗಸೂಚಿಗಳನ್ನು ತಯಾರಿಸುವುದು.
  • ರಾಜ್ಯದಲ್ಲಿ ಕೌಶಲ್ಯ ತರಬೇತಿಗಾಗಿ ಮಾನದಂಡಗಳನ್ನು ಮತ್ತು ಕೌಶಲ್ಯ ಕಾರ್ಯಕ್ರಮಗಳ ಮಾನದಂಡಗಳನ್ನು ಸುಧಾರಿಸಲು ತಯಾರುರಾಜ್ಯದಲ್ಲಿ ಕೌಶಲ್ಯ ತರಬೇತಿಗಾಗಿ ಮಾನದಂಡಗಳನ್ನು ಮತ್ತು ಕೌಶಲ್ಯ ಕಾರ್ಯಕ್ರಮಗಳ ಮಾನದಂಡಗಳನ್ನು ಸುಧಾರಿಸಲು ತಯಾರುಗೊಳೀಸುವುದು.
  • ಜಾಗತಿಕ ಮಾನದಂಡಗಳು ಮತ್ತು ಉತ್ತಮ ಅಭ್ಯಾಸಗಳನ್ನು ಆಧರಿಸಿ, ಕಾರ್ಮಿಕ ಮಾರುಕಟ್ಟೆಯನ್ನು ವಿನ್ಯಾಸಗೊಳಿಸುವುದು ಹಾಗೂ ಮಾಹಿತಿ ವ್ಯವಸ್ಥೆಗಳು ಮತ್ತು ಡೇಟಾ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದು.
  • ವಿನ್ಯಾಸ, ಕಾರ್ಮಿಕ ಮಾರುಕಟ್ಟೆ ಮಾಹಿತಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ಮತ್ತು ಜಾಗತಿಕ ಗುಣಮಟ್ಟ ಮತ್ತು ಉತ್ತಮ ಆರ್ಭಯಾಸಗಳನ್ನು ಆಧರಿಸಿದ ದತ್ತಾಂಶ ವ್ಯವಸ್ಥೆಗೊಳಿಸುವುದು.
  • ಕೌಶಲ್ಯ ಅಭಿವೃದ್ಧಿಗೆ ಸಂಬಂಧಿಸಿದ ಸಂಶೋಧನಾ ಒಳಹರಿವುಗಳಿಗಾಗಿ ಥಿಂಕ್-ಟ್ಯಾಂಕ್ ಫೋರಂ ಆಗಿ ಕೆಲಸ ಮಾಡುವುದು.
  • ಕೆಎಸ್‍ಡಿಎ ಉದ್ದೇಶಗಳನ್ನು ಪೂರೈಸಲು ಇತರ ಚಟುವಟಿಕೆಗಳನ್ನು ಕೈಗೊಳ್ಳುವುದು.